Friday, October 7, 2016





Directed by
Produced by
S. Prasanna
S. Shashikala Balaji
Screenplay by
Vijaya Prasad
Story by
Vijaya Prasad
Starring
Music by
Cinematography
Sugnan
Edited by
Production
company
Skkandda Entertainment
Distributed by
C K Cine Creations
Release dates
    • September 2, 2016
Running time
135 minutes
Country
India
Language
Kannada



ಬಣ್ಣ ಬಣ್ಣದ ಚಿತ್ತಾರ ಬಿಡಿಸುವಷ್ಟೇ ಸೊಗಸಾಗಿ ವಿಜಯ ಪ್ರಸಾದ್ ಅವರು ಪಾತ್ರಗಳನ್ನ ತೆರೆ ಮೇಲೆ ತೆರೆದಿಡ್ತಾರೆ . ಅವರ ಈ ಕಲಾ ನೈಪುಣ್ಯತೆ ನೀರ್ ದೋಸೆಗೆ ಕೂಡ ಜೀವ ತುಂಬ ಬಲ್ಲದ್ದು . ಬಹಳ ಬೋಲ್ಡ್ ವಿಷಯವನ್ನು ಆಯ್ಕೆ ಮಾಡಿದ್ದು , ನಿಸ್ಸಂಕೋಚವಾಗಿ ಕಥೆಗೆ ವಿಷಯ ತುಂಬಿದ್ದಾರೆ.

ಸಂಭಾಷಣಾ ಶೈಲಿ , ಹಾಡುಗಳು ,ಪ್ರಮುಖ ಪಾತ್ರಗಳ ಬಾಲ್ಯಕ್ಕೆ ಕೊಡುವ ಒತ್ತು, ಬಣ್ಣರಹಿತ ದೃಶ್ಯಗಳ ಪ್ರಯೋಗ , ಸಾವನ್ನು ಸಂಬೋಧಿಸುವ ರೀತಿ - ಇವೆಲ್ಲವನ್ನೂ ಗಮನಿಸಿದರೆ ವಿಜಯ ಅವರು ತಮ್ಮ ಛಾಪು ಬಿಡದೆ ವೈವಿಧ್ಯ ಸಿನೆಮಾಗಳನ್ನು ಮಾಡಲು ಸಮರ್ಥರು ಎಂದು ಖಾತ್ರಿಗೊಳಿಸುತ್ತದೆ .

ಡಬ್ಬಲ್ ಮೀನಿಂಗ್ ಸಂಭಾಷಣೆಯನ್ನೇ ಬಂಡವಾಳವಾಗಿಸಿಕೊಂಡು ಸಿನೆಮಾ ಗೆಲ್ಲಿಸುವ ಪ್ರಯತ್ನ ಇದು ಖಂಡಿತಾ ಅಲ್ಲ ! ಸಿನೆಮಾ ಹೇಳುವ ವಿಚಾರ ತೀರಾ ಅಶ್ಲೀಲ ಅನ್ನಿಸಬಾರದು ಎಂಬ ಕಾರಣಕ್ಕೆ ಮಾತ್ರ ಬಳಸಿಕೊಳ್ಳಲಾಗಿದೆ .ಒಂದು A certificate ಸಿನೆಮಾ ನ ಇಷ್ಟು ಮಾನವಂತವಾಗಿ ಪ್ರಸ್ತುತ ಪಡಿಸಿರುವುದಕ್ಕೆ ನೀರ್ ದೋಸೆ ಚಿತ್ರ ತಂಡಕ್ಕೆ ಪೂರ್ಣ ಅಂಕಗಳನ್ನ ಕೊಡಲೇ ಬೇಕು .

ಈ ವರೆಗೆ ನಾವ್ಯಾರೂ ನೋಡದಂತಹ ದತ್ತಣ್ಣನ್ನ ಅವರ ನೂರನೇ ಚಿತ್ರದಲ್ಲಿ ನಾವೆಲ್ಲಾ ನೋಡಬಹುದಾಗಿದೆ . ನಗು, ಅಳು ಎಲ್ಲವೂ ವಿಭಿನ್ನವಾಗಿ ನೀಡಿ ಕಡೆಗೆ ಛಳಿ ಬಿಟ್ಟು ಡಾನ್ಸ್ ಕೂಡ ಮಾಡಿ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ .

ದತ್ತಣ್ಣ ಅವರ ಪಾತ್ರದ ಸಮಕ್ಕೆ ನಿಲ್ಲುವ ಜಗ್ಗೇಶ್ ಅವರ ಪಾತ್ರ ಪ್ರೇಕ್ಷಕರಿಗೆ ಎಲ್ಲಿಯೂ ವಯ್ಯಕ್ತಿಕ ತಿಕ್ಕಾಟ ಅಥವಾ ಪೈಪೋಟಿಗೆ ನಿಂತಂತೆ ಕಾಣುವುದಿಲ್ಲ . ಜಗ್ಗೇಶ್ ಅಂತಹಾ ಮಾಸ್ ಹೀರೊ ಇಷ್ಟು ಅದ್ಭುತವಾಗಿ ಇಂತಹಾ ಪಾತ್ರಕ್ಕೆ ಒಗ್ಗಿರುವುದು ನೋಡಿದರೆ ಅವರಿಗೆ ತಮ್ಮ ಪಾತ್ರದ ಬಗ್ಗೆ , ಅಭಿನಯದ ಬಗ್ಗೆ ಇರುವ ಅರಿವು ಮತ್ತು ಗೌರವವನ್ನು  ನಿರೂಪಿಸುತ್ತದೆ.

ಒಬ್ಬ ಉತ್ತಮ ಕಲಾವಿದ ತನ್ನ ಪ್ರೇಕ್ಷಕರ ಮನಸ್ಸು ಗೆಲ್ಲೋದಕ್ಕೆ, ತಾನು ಎಷ್ಟು ಸಮಯ ತೆರೆಯ ಮೇಲೆ ಕಾಣ್ತೀನಿ ಅಥವಾ ತನ್ನ ಪಾತ್ರಕ್ಕೆ ಎಷ್ಟು ಡಯಲಾಗ್ ಗಳು ಇವೆ ಅನ್ನುವುದರ ಬಗ್ಗೆ ಯೋಚಿಸುವುದಿಲ್ಲ . ಸುಮನ್ ರಂಗನಾಥ್ ಅವರು ಅಲ್ಲಲ್ಲಿ ಇಣುಕುವ ಪಾತ್ರದಲ್ಲಿದ್ದರೂ , ಮೊದಲ ಬಾರಿ ಅವರನ್ನು ಕಾಣುವವರ ಮನಸ್ಸನ್ನೂ ಗೆದ್ದುಬಿಡುವಂತೆ ಅಭಿನಯಿಸಿದ್ದಾರೆ .

ಹರಿಪ್ರಿಯಾ ಚಿತ್ರದ ಜೀವಾಳ . ಸುಮನ್ ಅವರ ಪಾತ್ರದ ಆಳ ಪ್ರೇಕ್ಷಕನ ಯೋಚನೆಗೆ ತಕ್ಕಂತೆ ಎನ್ನುವುದಾದರೆ , ಹರಿಪ್ರಿಯಾ ಅವರ ಪಾತ್ರದ ಆಳ ವಿಜಯ ಅವರು ಬಿಡಿಸಿ ಇಟ್ಟಷ್ಟೇ. ಒಂದೇ ಮಾತಲ್ಲಿ ಹೇಳುವುದಾದರೆ ಹರಿಪ್ರಿಯಾ ಅವರು ಸಂಪೂರ್ಣ ನಿರ್ದೇಶಕನ ಕೈಗೊಂಬೆಯಾಗಿ ನಟಿಸಿ ಈ ಪಾತ್ರದ ಗೆಲುವಿಗೆ ಕಾರಣರಾಗಿದ್ದಾರೆ.  ಚಿತ್ರರಂಗದಲ್ಲಿ ತಮ್ಮ ಸ್ಥಾನ ಹೆಚ್ಚಿಸಿಕೊಂಡಿದ್ದಾರೆ

ಬಾಲ್ಯದ ಕಥೆಯಲ್ಲಿ ಅಭಿನಯಿಸಿರುವ ನಟ ನಟಿಯಿಂದಾ ಹಿಡಿದು ದತ್ತಣ್ಣ ಪಾತ್ರದ ಅಕ್ಕನ ಪಾತ್ರ ವಹಿಸಿರುವ ನಟರ ವರೆಗೂ ಎಲ್ಲಾ ಸಣ್ಣ ಪುಟ್ಟ ಪಾತ್ರಗಳ ನುರಿತ ಅಭಿನಯ ಈ ಚಿತ್ರವನ್ನು ಹುರುಪು ಗೊಳಿಸಿದೆ.
ಅರಸು ಅಂತಾರೆ ಮತ್ತು ಅನೂಪ್ ಸೀಳಿನ್ ಅವರ "ಸಪುರ ಕಟಿ" ಪ್ರಯೋಗ ಕೇಳುಗರನ್ನು ಬಹಳವಾಗಿ ಆಕರ್ಷಿಸುತ್ತದೆ .ಸುಗನ್ ಅವರ ಛಾಯಾಗ್ರಹಣೆ ಮತ್ತೆ ಮತ್ತ ಸಿನಿಮಾ ನೋಡುವಂತೆ ಮಾಡುತ್ತದೆ .
  

No comments:

Post a Comment