Tuesday, January 17, 2017




Directed by
Produced by
G S Guptha
Written by
Starring
Pramod Shetty
Music by
Cinematography
Karam Chawla
Edited by
Sachin



 ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ತಮ್ಮ- 'ವರ್ಷದ ಕೊನೆಗೆ ಸಿನೆಮಾ ರಿಲೀಸ್' ಮಾಡುವ ಪರಂಪರೆಯನ್ನು ಮುಂದಿವರೆಸುತ್ತಾ , ನಮ್ಮ ಮುಂದೆ ಕಿರೀಕ್ ಪಾರ್ಟಿ ಇಟ್ಟಿದ್ದಾರೆ , ರಿಷಬ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಎರೆಡನೆ ಚಿತ್ರ ಇದಾಗಿದ್ದು , ರಕ್ಷಿತ್ ಬರೆದಿರುವ ಎರೆಡನೆ ಕಥೆ ಇದಾಗಿದೆ (ಉಳಿದವರು ಕಂಡಂತೆ ಮೊದಲನೇ ಕಥೆ ).  ಆರು ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿ ಬೆಳ್ಳಿ ತೆರೆಯಲ್ಲಿ ಮಿಂಚಿ ಎಲ್ಲಾ ವಯಸ್ಸಿನ ಅಭಿಮಾನಿಗಳ ಪ್ರೀತಿ ಆಶೀರ್ವಾದ ಸಂಪಾದಿಸಿರುವ ರಕ್ಷಿತ್ , ತಮ್ಮದೇ ಪ್ರೊಡಕ್ಷನ್ ಹೌಸ್ - "ಪರಂವಃ ಸ್ಟೂಡಿಯೋಸ್" ಮೂಲಕ ಕಿರಿಕ್ ಪಾರ್ಟಿ ಸಿನಿಮಾ ಪ್ರಸ್ತುತ ಪಡಿಸಿರುವುದು ಕನ್ನಡ ಚಿತ್ರ ಅಭಿಮಾನಿಗಳಿಗೆ ಆಶಾದಾಯಕವಾದ ಸಂಗತಿ .

ಸಿನೆಮಾ ಕಾಲೇಜ್ ವಿಷಯವನ್ನಾಧರಿಸಿದ್ದು ಎಲ್ಲಾ ವಯಸ್ಸಿನವರ ಆಸಕ್ತಿಗಳನ್ನೂ ಒಳಗೊಂಡಿರುವುದು ವಿಶೇಷ.
ಶುರುವಿನಲ್ಲಿ ಮೋಜು ಮಸ್ತಿ ತೋರಿಸಿ ಮಧಾಂತರದ ನಂತರದಲ್ಲಿ ಕಥೆ ಗಂಭೀರವಾಗುವುದು ಪದ್ಧತಿಯಾದರೂ , ಈ ಸಿನೆಮಾ ಚಿತ್ರಕಥೆಯ ದ್ರಿಷ್ಟಿಯಲ್ಲಿ ಹೊಸ ಪ್ರಯೋಗ ಎನ್ನಬಹುದು . ಆ ಕಾರಣದಿಂದಲೇ ಪ್ರೇಕ್ಷಕನ ಗಮನ ವಿಚಲಿತವಾಗುವ ಸಾಧ್ಯತೆಗಳು ಬಹಳ ಕಡಿಮೆ . ಹಾಸ್ಯ - ಸಂಗೀತ - ಕನ್ನಡ ಪ್ರಧಾನ ಹಾಡುಗಳು ಹಾಗು ಸಂಭಾಷಣೆ ಎಲ್ಲವೂ ಯುವ ಕನ್ನಡಿಗರಲ್ಲಿ ಒಂದು ಹೊಸ ಹುಮ್ಮಸ್ಸು ಮೂಡಿಸುವುದರಲ್ಲಿ ಯಶಸ್ವಿ ಆಗಲಿದೆ . ಉಳಿದವರು ಕಂಡಂತೆ ಸಿನಿಮಾ ದ ತಾಂತ್ರಿಕ ತಂಡ ಈ ಸಿನೆಮಾ ಗೆ ಕೆಲಸ ಮಾಡಿರುವುದು ತೆರೆಯಮೇಲೆ ಅವರದೇ ಆದ ಛಾಪಿನ ಮೂಲಕವೇ ತಿಳಿದುಹೋಗುತ್ತದೆ(title card ನೋಡುವ ಅಗತ್ಯವೇ ಇಲ್ಲ ) .

ಕಿರಿಕ್ ಪಾರ್ಟಿ ಕಥೆಯ ಜೀವಾಳದಂತಿರುವ ಸನ್ನಿವೇಶ ಎಷ್ಟು ಬೇಡಾ ಅಂದರೂ  2014 ರಲ್ಲಿ ಬಂದ ಮಲಯಾಳಂ ಸಿನೆಮಾ Bangalore Days ನ ಮುಖ್ಯ ಸನ್ನಿವೇಶವನ್ನು ನೆನಪಿಸುತ್ತದೆ . ಪ್ರಮುಖ ಪಾತ್ರದಲ್ಲಿ ನಟಿಸಿರುವವರಷ್ಟೇ ಅಲ್ಲದೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿರುವವರೂ ಕೂಡ ಉತ್ತಮವಾಗಿ ಅಭಿನಯಿಸಿದ್ದಾರೆ . ಅದಾದ ಕಾರಣ ಪ್ರೇಕ್ಷಕ ಹುಳುಕು ಕನ್ನಡ ಸಿನೆಮಾ ಬಗ್ಗೆ ಕನಿಕರ ತೋರಿಸೊಕ್ಕೆ ಈ ಸಿನಿಮಾ ನೋಡುವ ಅಗತ್ಯವಿಲ್ಲ , ಬೇರೆ ಭಾಷೆ ಚಿತ್ರಗಳ ಆಯ್ಕೆ ಮಧ್ಯದಲ್ಲೂ ನಮ್ಮವರು ಖುಷಿಯಾಗಿ ಕಿರಿಕ್ ಪಾರ್ಟಿ ಯನ್ನು ವೀಕ್ಷಿಸಲು ಚಿತ್ರಮಂದಿರಗಳಿಗೆ ಧೈರ್ಯವಾಗಿ ಬರಬಹುದು . ಹೋಗ್ಲಿ ಬಿಡು ಅಂತ ಕ್ಷಮಿಸಬೇಕಾದ ಸಣ್ಣ ಪುಟ್ಟ ತಾಂತ್ರಿಕ ಹುಳುಕುಗಳು ಅಥವಾ ಬಲಹೀನ ಕಥೆಗಾರಿಕೆ ಇಲ್ಲದ ಕಾರಣ ಈ ಚಿತ್ರಕ್ಕೆ ಎಲ್ಲರೂ ನೂರಕ್ಕೆ ನೂರು ಕೊಡುವುದು ಗ್ಯಾರಂಟೀ !ಹುಡುಕುವ ಕೆಲಸ ಮರೆತು ಕಥೆಯ ಜೊತೆಗೆ ಇರುತ್ತಾನೆ ಎಂಬುದು ಖಂಡಿತ.