Friday, May 5, 2017

 



Shuddhi
Directed byAdarsh Eshwarappa
Produced byNandini Madesh
Madesh T. Bhaskar
StarringNivedhitha
Lauren Sparton
Amrutha Karagada
Music byJesse Clinton
CinematographyAndrew Aiello
Edited byRamsetty Pawan
Production
company
Saanvi Pictures
Release date
  • 17 March 2017
CountryIndia
LanguageKannada

ಸಿನಿಮಾ ಬಂದು ತಿಂಗಳ ಮೇಲಾಗಿದೆ , ಇಷ್ಟು ತಡವಾಗಿ review ಯಾಕೆ ಅನ್ಕೋತೀರೇನೋ ; ಕಾರಣ ಇದೆ . ಮೊದಲು review ಮುಗಿಸೋಣ ಆಮೇಲೆ ಕಾರಣ ನಿಮಗೇ ಅರ್ಥವಾಗುತ್ತೆ .
ಮೂರು ಹೆಣ್ಣು ಮಕ್ಕಳು ಚಿತ್ರವನ್ನ ಆವರಿಸಿರ್ತಾರೆ ಅನ್ನೋ ಕಲ್ಪನೆಯಲ್ಲೇ ಈ ಚಿತ್ರದಲ್ಲಿ ಏನಿರಬಹುದು ಏನಿರುವುದಿಲ್ಲ ಅನ್ನುವಂಥ ಕೆಲ ಯೋಚನೆಗಳು ನೀವು theatre ಅಲ್ಲಿ ಕೂರುವ ಮುಂಚೆಯೇ ನಿರ್ಧಾರವಾಗಿಹೋಗಿರುತ್ತೆ .

ನಮ್ಮ ದೇಶದವರೇ ಆದರೂ ಕನ್ನಡತಿಯರಲ್ಲದ ನಟಿಯರನ್ನು ನಾವು ತೆರೆ ಮೇಲೆ ಒಪ್ಪಿಕೊಳ್ಳಲು ಅದೆಷ್ಟು ಸಾಹಸ ಪಡ್ತೀವೋ ಅದರಲ್ಲಿ ಸಾವಿರದೊಂದನೆ ಪಾಲಿನಷ್ಟು ಕೂಡ ಕಷ್ಟವಾಗೋಲ್ಲ Lauren ನ ತೆರೆಮೇಲೆ ನೋಡುವಾಗ . ಸ್ಮಿತಾ ಹೆಸರಿನಲ್ಲಿ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈಗಿನ ನಿವೇದಿತಾ ತಮ್ಮ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿದ್ದಾರೆ . ಮೊದಲ ಬಾರಿ ತೆರೆಗೇರಿರುವ ಅಮೃತ ಕರಗದ ತಮ್ಮ ಪಾತ್ರಕ್ಕೆ ತಕ್ಕ ನಟನೆ ಪ್ರದರ್ಶಿಸಿದ್ದು ಕನ್ನಡದ ಆಶಾದಾಯಕ ನಟಿಯರಲ್ಲಿ ಒಬ್ಬರಾಗುವುದು ಖಂಡಿತ.

ಆಗಾಗ ಕಾಣಿಸಿಕೊಳ್ಳುವ ಕಿರುತೆರೆ ಖ್ಯಾತಿಯ ಶಶಾಂಕ್ ಹಾಗೂ ಸಿದ್ಧಾರ್ಥ ಅಭಿನಯಿಸಿರುವ ಪಾತ್ರಗಳು  ಕೆಲ ಕಡೆ ಪ್ರೇಕ್ಷಕರನ್ನು ರಂಜಿಸಿದರೆ ಮತ್ತೆ ಕೆಲ ಕಡೆ ಅನವಶ್ಯಕವಾಗಿ ಬೋರ್ ಹಿಡಿಸುತ್ತವೆ . ಮೊದಲಾರ್ಧದ ಎಷ್ಟೋ ದೃಶ್ಯಗಳು ವೇಗ ತಪ್ಪಿದಂತೆ ಭಾಸವಾಗುತ್ತದೆ . ಅಜಯ್ ಮತ್ತು ಸಂಚಾರಿ ವಿಜಯ್ ಅವರ ಪಾತ್ರಗಳು ಪುಟ್ಟವಾದರೂ ಅದರ ರಚನೆ ಹಾಗು ನಿರ್ವಹಣೆ ಅದ್ಭುತವಾಗಿವೆ .

ಚೊಚ್ಚಲ ಪ್ರಯತ್ನವಾದರೂ ನಟನೆಯಲ್ಲಿ ಯಾವುದೇ ರೀತಿಯ compromise ಮಾಡಿಕೊಳ್ಳದೆ ಚಿತ್ರದ ಗುಣಮಟ್ಟವನ್ನು ಕಾಪಾಡಿರುವ ನಿರ್ದೇಶಕ ಆದರ್ಶ್ ಬಹಳ ಒಳ್ಳೆಯ ಕಥೆ ನಮ್ಮ ಮುಂದಿಟ್ಟಿದ್ದಾರೆ . ಬಹುಷಃ ಕಥೆ ತಾವೇ ಬರೆದಿರುವುದರಿಂದ ಈ ಮಟ್ಟದ ಹಿಡಿತ ಸಾಧ್ಯವಾಗಿದ್ದಿರಬಹುದು . ಬೇಡದ ಆವೇಶದಿಂದ ಬಹಳಷ್ಟು ನಿರ್ದೇಶಕರು ಎಡವುವಂತೆ ಇವರಲ್ಲ . ಇತಿ ಮಿತಿ ಗಳ ಅರಿವು ಬಹಳ ಕರಾರುವಾಕ್ಕಾಗಿ ತಿಳಿದಿದ್ದರೆ . ಚಿತ್ರೀಕರಣದ ಶೈಲಿ ಈ ಮಾತನ್ನು ನಿರೂಪಿಸುತ್ತದೆ .

ಸಬ್ಸಿಡಿ ಗಿಟ್ಟಿಸಿಕೊಳ್ಳೋಕ್ಕೆ ಅಂತ ಕೆಲವರು ಈ ಅತ್ಯಾಚಾರ ವಿಷಯಾಧಾರಿತ ಚಿತ್ರಗಳು ತೆಗೀತಾರೆ . ಮತ್ತೆ ಕೆಲವರು ಒಂದು ಅತ್ಯಾಚಾರದ ಸುತ್ತಲೇ ಪ್ರೇಕ್ಷಕರ ಎಲ್ಲ ರೀತಿಯ ಭಾವನೆಗಳನ್ನು ಏರಿಳಿಸುತ್ತಾರೆ . ಶುದ್ಧಿ ಇವೆಲ್ಲ ರೀತಿಯಾ ಚಿತ್ರಗಳಿಗಿಂತ ಮಿಗಿಲಾದ ಪ್ರಯತ್ನ .

ಚಿತ್ರದ ವಿಷಯ ಮೇಲ್ನೋಟಕ್ಕೆ ‘ಹೆಣ್ಣಿನ ಅತ್ಯಾಚಾರ’ ಎಂದು ಕಂಡರೂ , ಮುಖ್ಯ ಕಥಾವಸ್ತು ನಾಏಡಿಯುವ ಪ್ರತಿ ಅತ್ಯಾಚಾರದಲ್ಲಿ ಪಾಲ್ಗೊಳ್ಳುವ ಅಪ್ರಾಪ್ತ ವಯಸ್ಕರು ‘ಜುವೆನೈಲ್ ಗಳ ಬಗ್ಗೆಯಾಗಿದೆ . ನಾನು ನೋಡಿರುವ rape based ಸಿನಿಮಾದಲ್ಲೆಲ್ಲಾ ಒಂದು ದ್ರಿಶ್ಯವನ್ನು ಬಹಳ ಅಮಾನುಷವಾಗಿಯೋ ಕ್ರೂರವಾಗಿಯೋ ತೆರೆ ಮೇಲೆ ತೋರಿಸುತ್ತಾರೆ . ಪ್ರೇಕ್ಷಕನ ಮನಸ್ಸನ್ನು ಸಂಪೂರ್ಣ ಆವರಿಸಿ ಕದಡಿ ರೋಚ್ಚಿಗೆಬ್ಬಿಸುವ ಪ್ರಯತ್ನ . ಆದರೆ ಶುದ್ಧಿಯ ಉದ್ದೇಶ  ಅದಾಗಿರಲಿಲ್ಲ , ಹಾಗಾಗಿ ಎಲ್ಲಿಯೂ ಅವರು ಹೇಳಬೇಕೆಂದಿರುವ ಸಂದೇಶದಿಂದ ಎಲ್ಲಿಯೂ ದೃಶ್ಯಗಳು ಹೊರಳುವುದಿಲ್ಲ . ಮಹಿಶಾಸುರ ಮರ್ಧಿನಿ , ಭಗವತ್ ಗೀತೆ ಯ ಉಲ್ಲೇಖಗಳು ಮುಖ್ಯ ಕಥಾವಸ್ತುವಿಂದ ಪ್ರೇಕ್ಷಕನ ಯೋಚನೆಗಳನ್ನು ಕುಗ್ಗಿಸದೆ ಪ್ರಗತಿಪರವಾಗೇ ಒಯ್ಯುತ್ತದೆ .

ಇವತ್ತು ಜ್ಯೋತಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿದೆ . ಅದೆಷ್ಟೋ ಜನ ಆಗಲೇ ನಿಟ್ಟುಸಿರು ಬಿಟ್ಟೇ ಬಿಟ್ಟಿದ್ದಾರೆ . ಆದರೆ ನಾವು ಆ ಜ್ಯೋತಿ ಗೆ ನಿರ್ಭಯ ಎಂಬ ಹೆಸರಿಟ್ಟದ್ದು ಯಾತಕ್ಕಾಗಿ ಎಂಬುದನ್ನೇ ಮರೆತಿರುವರು ಎಷ್ಟೋ ಜನ . ಕಲ್ಪನೆಗೂ ಮೀರಿದ ಹಿಂಸೆಯನ್ನು ಸಹಿಸಿ ತನ್ನ ಜೀವ ಹಿಡಿದಿಟ್ಟುಕೊಂಡು ಸ್ವಯಂ ಸಾಕ್ಷಿ ಹೇಳಿಯೇ ಉಸಿರು ಬಿಟ್ಟ ಅವಳು ಭಾರತದ ನ್ಯಾಯಾಂಗವನ್ನು ಬಡಿದೆಬ್ಬಿಸಿದ ಧೀರ ಮಹಿಳೆ . ಇವತ್ತಿಗೆ ಅವಳು ಹಚ್ಚಿದ ಕಿಡಿ ಹೊತ್ತಿಕೊಂಡಿದೆಯಷ್ಟೆ …. ಜುವೆನೈಲ್ ಶಿಕ್ಷೆ ತಪ್ಪಿಸಿಕೊಂಡಾಗಿದೆ . ಈಗಲೇ ನಾನಂತೂ ನಿಟ್ಟುಸಿರು ಬಿಡುವುದಿಲ್ಲ … ಇದು ಕೊನೆಯಲ್ಲ ಶುಭಾನ್ತ್ಯವಲ್ಲ …. ಸಂಪೂರ್ಣ ನ್ಯಾಯವೂ ಅಲ್ಲ …. ಹಾಗಿದ್ದಮೇಲೆ ನಿರ್ಭಯ ಳಿಗೆ ಶಾಂತಿ ಈಗಲೇ ಹೇಗೆ ಸಿಗಲು ಸಾಧ್ಯ ?